Friday, December 27, 2013

ಕೇರಳ ತಮಿಳುನಾಡಾಯಿತು.......!!!

                                       
                          ಪರೀಕ್ಷೆಗಳ ಹಾವಳಿ ಮುಗಿದ ತಕ್ಷಣ ಎಲ್ಲಿಗಾದರೂ ಪ್ರವಾಸ ಹೋಗುವ ಹುಚ್ಚು ಹಾಗೂ ಹಂಬಲ ಈಗಿನ ಯುವಕ ಯುವತಿಯರಲ್ಲಿ ಕಂಡುಬರುವ ಸಾಮಾನ್ಯ ಗುಣ. ಹಾಗೆಯೇ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ನಮಗೆ ಯಾವುದಾದರೂ ಒಂದು ಸುಂದರ ತಾಣಕ್ಕೆ ಹೋಗಬೇಕೆಂಬ ಬಯಕೆ ಕಾಡತೊಡಗಿತು...!! ಬಿಸಿರಕ್ತದ ಯುವಕರಾದ ನಮಗೆ ಬೈಕ್ ಗಳಲ್ಲಿ ದೂರ ಪ್ರಯಾಣ ಮಾಡುವ ಹುಚ್ಚು. ಅಂತೆಯೇ ಎಲ್ಲರೂ ಸೇರಿ, ಮೈಸೂರಿನಿಂದ ಸುಮಾರು ೧೩೦ ಕಿಮಿ ದೂರ ಇರುವ ಎಡಕಲ್ಲು ಸ್ಥಳಕ್ಕೆ ಹೋಗುವುದೆಂದು ತೀರ್ಮಾನಿಸಿದೆವು.
 ಡಿಸೆಂಬರ್ 25ರ ಚಳಿ ಚಳಿಯ ಮುಂಜಾನೆ ಸುಮಾರು ಏಳು ಗಂಟೆಗೆ ನಾಲ್ಕು ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿ ಎಂಟು ಜನ ಹೊರಡಲು ಸಿದ್ದರಾದೆವು. ಸರಿಯಾಗಿ ಏಳು ಹದಿನೈದಕ್ಕೆ ಜೈ ಹನುಮ ಎಂದು ನಮ್ಮ ಪಯಣ ಆರಂಬಿಸೆದಿವು. ನಂಜನುಗೂಡಿಗೆ 7:45ಕ್ಕೆ ತಲುಪಿದ ನಮಗೆ ಹೊಟ್ಟೆ ಚುರ್ ಎನ್ನಲು ಶುರುವಾಯಿತು. so ಅಲ್ಲಿಯೇ ಬಿಸಿ ಬಿಸಿ ಇಡ್ಲಿ ವಡೆ, ಮಸಾಲೆ ದೋಸೆ, ಈರುಳ್ಳಿ ದೋಸೆಯನ್ನು ಸೇವಿಸಿ ಮುನ್ನಡೆದೆವು. ಚಳಿಯನ್ನು ತಡೆದುಕೊಳ್ಳಲು ಕಾಫಿಯನ್ನು ಕುಡಿಯಲು ಮರೆಯಲಿಲ್ಲ...!! ನಂತರ ನಮ್ಮ ಪಯಣ ಗುಂಡ್ಲು ಪೇಟೆಯ ಕಡೆಗೆ ಮುಂದುವರೆಯಿತು. ಬೈಕ್ ಗಳಲ್ಲಿ ಚೇಷ್ಟೆಗಳನ್ನು ಮಾಡುತ್ತಾ  ಮುಂದುವರಿದ journey ಬಂಡೀಪುರದ ಅಭಯಾರಣ್ಯದ  ಒಳಗೆ ಸಾಗಿದರೂ ಒಂದು ಮುಖ್ಯವಾದ ವಿಷಯ ನಮ್ಮ ಅರಿವಿಗೆ ಬರಲೇ ಇಲ್ಲ. ಅಲ್ಲಿನ ಕಪಿಗಳ ಆಟ, ಜಿಂಕೆಗಳ ಓಟದ ನೋಟದ ಜೊತೆಗೆ ಹೋಗುತಿದ್ದ ನಮಗೆ "Visit Again Karnataka" ಎಂಬ ಬೋರ್ಡ್ ಎದುರಾಯಿತು.
                   ವೊಹೂ ಕೇರಳ ಎಂದು ಮುಂದೆ ಹೋದತಕ್ಷಣ ಎಲ್ಲರ ಮೊಬೈಲ್ ಗಳಿಗೆ "welcome to Tamil Nadu" ಎಂಬ ಸಂದೇಶಗಳು ಬರಲಾರಂಭಿಸಿದವು. ಎಲ್ಲರೂ ಒಂದು ಕ್ಷಣ ದಂಗಾದೆವು.... ಆದರೂ ಏನೋ ತಾಂತ್ರಿಕ ಸಮಸ್ಯೆ ಇರಬಹುದು ಎಂದುಕೊಂಡು ಮುನ್ನಡೆದ ನಮಗೆ ಎದುರಾಗಿದ್ದು  ಮದುಮಲೈ......!!!! ಆಗ ಅರಿವಿಗೆ ಬಂತು, ಕೇರಳಕ್ಕೆ ಬಂದಿಲ್ಲ ಬಂದಿರುವುದು ತಮಿಳು ನಾಡಿಗೆ ಎಂದು.....!!! ಗುಂಡ್ಲು ಪೇಟೆ ಇಂದ ದಾರಿ ತಪ್ಪಿದೆವು ಎಂದ ತಿಳಿದು ಮತ್ತೆ ತಿರುಗಿ ಎಡಕಲ್ಲಿಗೆ ಹೋಗುವ ಬದಲು "Let's go to Ooty" ಎಂದು ನಮ್ಮ ಪ್ಲಾನ್ ಆನ್ನೇ ಬದಲಾಯಿಸಿಬಿಟ್ಟೆವು . ಬಹುಶಃ ಊಟಿ ಗೆ ದಾರಿ ತಪ್ಪಿ ಹೋದ ಮೊದಲಲಿಗರು ನಾವೇ ಇರಬಹುದು... ಅಲ್ಲವೇ...!!  ನಂತರ "Pyakara" ಜಲಪಾತವನ್ನು ನೋಡಿ
                 ಹಾವಿನ ಹಾದಿಯಂತಿದ್ದ ಹೈವೇ ಯಲ್ಲಿ ಊಟಿ ಗೆ ಹೊರಟೆವು. ಹಲವಾರು ಸಾಹಸಮಯ ಸನ್ನಿವೇಶಗಳನ್ನು ಎದುರಿಸಿ ಕಡೆಗೂ ಮದ್ಯಾಹ್ನ 2:30ಗೆ ಊಟಿ ಸೇರಿದೆವು.

                  ಅಲ್ಲಿನ ಸ್ಥಳಗಳನ್ನು ವೀಕ್ಷಿಸಿ 4:30ಯ ಹೊತ್ತಿಗೆ ವಾಪಾಸಾಗಲು ಸಿದ್ದರಾದೆವು. ಬಂಡೀಪುರದ ಮುಖ್ಯ ಬಾಗಿಲು 6ಗಂಟೆಗೆ ಮುಚ್ಚಲಾಗುತ್ತದೆ ಎಂದು ತಿಳಿದ ಕೂಡಲೇ ಶರವೇಗದಲ್ಲಿ ಹಿಂತಿರುಗಲಾರಂಭಿಸಿದೆವು. ಕಡೆಗೂ we were able to reach mysore at 9:00PM..... ಬಂದು ಊಟವನ್ನು ಮಾಡಿ ಮಲಗಿದ ನಮ್ಮನ್ನು ನಿದ್ರಾದೇವಿ ತುಂಬ ಪ್ರೀತಿಯಿಂದ ಅಪ್ಪಿಕೊಂಡಳು.


                ಹೀಗೆ ಪರೀಕ್ಷೆಯ ತಲೆ ನೋವನ್ನು ಮರೆಯಲು ಹೊರಟ ನಮಗೆ ಕೇರಳ ತಮಿಳು ನಾಡಾಗಿಹೋಯಿತು.... But anyway we had a great day....!